Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬ್ಯಾಚುಲರ್ ಲೈಫಲ್ಲಿ ಇಬ್ಬರು ಬೆಡಗಿಯರು 3.5/5 ****
Posted date: 06 Fri, Jan 2023 11:19:06 PM
 ಈಗಿನ ಕಾಲದ ಹುಡುಗರು ತಾನೊಬ್ಬ ಉದ್ಯಮಿ, ಡಾಕ್ಟರ್, ಇಂಜಿನಿಯರ್ ಇನ್ನು ಏನೇನೋ ಆಗಬೇಕೆಂದು ಕನಸುಗಳನ್ನು ಕಟ್ಟಿಕೊಂಡಿರುತ್ತಾನೆ. ಆದರೆ ನಮ್ಮ ಚಿತ್ರದ ನಾಯಕನ ಕನಸೇ ಬೇರೆ ತನ್ನ ಚಿಕ್ಕವಯಸ್ಸಿನಲ್ಲೇ ಮದುವೆಯ ಬಗ್ಗೆ ಸುಂದರವಾದ ಕನಸಿನ ಸೌಧವನ್ನೇ ಕಟ್ಟಿಕೊಂಡಿರುತ್ತಾನೆ. ಅಂಥವನ ಜೀವನದಲ್ಲಿ ನಡೆಯುವ ಪ್ರೇಮ ಪ್ರಕರಣಗಳು, ಜರುಗುವ ಅಚಾತುರ್ಯಗಳು, ಅವಾಂತರಗಳು, ಎದುರಾಗುವ ನೋವು, ನಲಿವು, ಇದೆಲ್ಲದರ ಜೊತೆ ಹೆಣ್ಣುಮಕ್ಕಳಿಗೆ ಒಂದು ಸಂದೇಶವನ್ನು ಹೇಳುವ ಚಿತ್ರವೇ ಮಿಸ್ಟರ್ ಬ್ಯಾಚುಲರ್. 
 
ನಾಯಕ ಕಾರ್ತೀಕ್ (ಡಾರ್ಲಿಂಗ್‌ಕೃಷ್ಣ) ದೃಷ್ಟಿಯಲ್ಲಿ ಮದುವೆ ಎಂದರೆ ಅದೊಂದು ಸಡಗರದ, ಸಂತಸದ ಕ್ಷಣ. ಆದರೆ ಆತನ ತಂದೆ-ತಾಯಿಗಳದು ಮಾತ್ರ ಕೆಲಸಸಿಕ್ಕ ನಂತರವಷ್ಟೇ ಮದುವೆಯ ಮಾತು ಎನ್ನುವ ಅಭಿಪ್ರಾಯ, ಸಂಗಾತಿಯನ್ನು ಹುಡುಕಿಕೊಳ್ಳಲು ಕಾರ್ತಿಕ್, ಒಬ್ಬ ಬ್ರೋಕರ್ ಮೊರೆ ಹೋಗುತ್ತಾನೆ. ಆತ ಕೊಡುವ ಆಲ್ಬಮ್‌ನಲ್ಲಿದ್ದ ಹುಡುಗಿಯೊಬ್ಬಳನ್ನು ಕಾರ್ತೀಕ್ ಇಷ್ಟಪಡುತ್ತಾನೆ. ನಂತರ ಕಾರ್ತಿಕ್ ಭೇಟಿಯಾದ ಆಕೆ(ಮಿಲನ ನಾಗರಾಜï) ನನಗೆ ವರ್ಜಿನ್ ಹುಡುಗ ಬೇಡ, ಮೊದಲು ಅದನ್ನು ಕಳೆದುಕೊಂಡು ಬಾ, ನಂತರ ಮದುವೆಯ ಮಾತು ಎನ್ನುತ್ತಾಳೆ. ಇದು ಕಾರ್ತೀಕ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ವರ್ಜಿನ್ ಕಳೆದುಕೊಳ್ಳಲುಹೋದ ಕಾರ್ತಿಕ್, ಹಲವಾರು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾನೆ. ಇದಕ್ಕೂ ಒಂದು ಪೂರ್ವಜರ ಶಾಪ ಕಾಡುತ್ತಿರುತ್ತದೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲುಹೋದ ನಾಯಕನ  ನೋವಿನ ಜೊತೆಗೆ ಸಂದೇಶವನ್ನು ಹೇಳಿರುವ ರೀತಿ ವಿಭಿನ್ನವಾಗಿದೆ. 
 
ಚಾನಲ್‌ನಲ್ಲಿ ಕೆಲಸ ಮಾಡುವ ಪಲ್ಲವಿಯನ್ನು(ನಿಮಿಕಾ ರತ್ನಾಕರ್) ರೌಡಿಗಳಿಂದ ಕಾಪಾಡುವ ಕಾರ್ತಿಕ್‌ಗೆ  ಆಕೆಯೊಂದಿಗೆ ಸ್ನೇಹ ಬೆಳೆಯುತ್ತದೆ. ಪ್ರೀತಿಗೆ ತಿರುಗುತ್ತದೆ. ನಿಶ್ಚಿತಾರ್ಥ ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿ ಗೆಳತಿಯ(ಮಿಲನ ನಾಗರಾಜ್) ಮೂಲಕ ಕಾರ್ತಿಕ್ ವರ್ಜಿನಿಟಿ ಪ್ರಕರಣ  ಪಲ್ಲವಿಗೆ ತಿಳಿಯುತ್ತದೆ. ಇಲ್ಲಿಂದ ಕಾರ್ತಿಕ್ ಬದುಕು ಮತ್ತೆ ಏರುಪೇರಾಗುತ್ತದೆ. ಹೆಣ್ಣುಮಕ್ಕಳನ್ನು ಸ್ಮಗ್ಲಿಂಗ್ ಮಾಡುವ ಕಿಡ್ನಾಪರ್‌ಗಳನ್ನು ಸೆದೆಬಡಿಯಲು ಹೋದ ಕಾರ್ತೀಕ್ ಅವರ ಕೈಗೇ ಸಿಕ್ಕಿಕೊಳ್ಳುತ್ತಾನೆ. ಈ ಎಲ್ಲ ಘಟನೆಗಳು ಅಂತಿಮಹಂತ ತಲುಪಿ, ಕೊನೆಗೆ ಕಾರ್ತಿಕ್ ಇಬ್ಬರಲ್ಲಿ ಯಾರನ್ನು ಮದುವೆಯಾಗುತ್ತಾನೆ, ಅಷ್ಟಕ್ಕೂ  ಆತನಿಗಿರುವ ಶಾಪವಾದರೂ ಏನು, ಇದೆಲ್ಲ ಪ್ರಶ್ನೆಗಳಿಗೂ  ಉತ್ತರವನ್ನು  ಮಿಸ್ಟರ್ ಬ್ಯಾಚುಲರ್ ಹೇಳುತ್ತದೆ. 
 
ನಾಯಕ ಡಾರ್ಲಿಂಗ್ ಕೃಷ್ಣ ತಮ್ಮ ಸಹಜಾಭಿನಯದ ಮೂಲಕವೇ ನೋಡುಗರಿಗೆ ಇಷ್ಟವಾಗುತ್ತಾರೆ.  ಅಲ್ಲದೆ  ಸಾಹಸ ಹಾಗೂ ಹಾಡುಗಳಲ್ಲಿ ಗಮನ ಸೆಳೆಯುತ್ತಾರೆ. ಇನ್ನು ನಾಯಕಿ ನಿಮಿಕಾ ರತ್ನಾಕರ್ ವಿಶೇಷ ಪಾತ್ರದ  ಮಿಲನ ನಾಗರಾಜ್ ಗಮನ ಸೆಳೆಯುತ್ತಾರೆ. ಉಳಿದಂತೆ ಸಾಧು ಕೋಕಿಲ, ಗಿರಿ, ಚಿಕ್ಕಣ್ಣ ಅವರ ಕಾಮಿಡಿ ಸೀನ್‌ಗಳು ಪ್ರೇಕ್ಷಕರಿಗೆ ಮಜ ಕೊಡುತ್ತವೆ. ಒಂದು ವಿಭಿನ್ನ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯ ಮೆಚ್ಚುವಂಥದ್ದು. ಕ್ರೇಜಿ ಮೈಂಡ್‌ನ ಶ್ರೀ ಅವರ ಕ್ಯಾಮೆರಾಕೈಚಳಕ ಉತ್ತಮವಾಗಿದೆ. ಅದೇರೀತಿ ಮಣಿಕಾಂತ್‌ ಕದ್ರಿ ಅವರ ಸಂಗೀತದ ಹಾಡುಗಳು ಇಂಪಾಗಿವೆ.  ಮನರಂಜನೆಗೆಂದೇ ಮಾಡಿರುವ ಈ ಚಿತ್ರವನ್ನು ಒಮ್ಮೆ  ಥೇಟರಿನಲ್ಲಿ  ಕಣ್ತುಂಬಿಕೊಳ್ಳಲು ಅಡ್ಡಿಯೇನಿಲ್ಲ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬ್ಯಾಚುಲರ್ ಲೈಫಲ್ಲಿ ಇಬ್ಬರು ಬೆಡಗಿಯರು 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.